Hanuman Chalisa Meaning in Kannada ಶ್ರೀ ಹನುಮಾನ ಚಾಲೀಸಾ ಅರ್ಥಸಹಿತ “ಶ್ರೀ ಗುರು ಚರನ ಸರೋಜ ರಜ ನಿಜ ಮನು ಮುಕುರ ಸುಧಾರಿ | ಬರನೂ ರಘುಬರ ಬಿಮಲ ಜಸು ಜೋ ದಾಯಕು ಫಲಚಾರಿ || (ಶ್ರೀ ಗುರುವಿನ ಪಾದಕಮಲಗಳ ಧೂಳಿನಿಂದ ನನ್ನ ಮನಸ್ಸೆಂಬ ಕನ್ನಡಿಯನ್ನು ಬೆಳಗಿ, ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ನೀಡುವ ಶ್ರೀ ರಘುರಾಮನ ವಿಮಲ ಚರಿತ್ರೆಯನ್ನು ವರ್ಣಿಸುವೆನು) ಬುದ್ಧಿಹೀನ ತನು ಜಾನಿಕೆ, ಸುಮಿರೌ ಪವನ ಕುಮಾರ | ಬಲಬುದ್ಧಿ ವಿದ್ಯಾ ದೇಹು ಮೋಹಿ, ಹರಹು ಕಲೆಸ…